ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಮಂದಾರ್ತಿಯಲ್ಲಿ ಯಕ್ಷಗಾನ ಚಿಂತನಾ ಸಭೆ - ಕಾಲಮಿತಿ ಯಕ್ಷಗಾನ ಬೇಕೇ ಬೇಡವೇ ?

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಆಗಸ್ಟ್ 8 , 2013
ಬ್ರಹ್ಮಾವರ , ಆಗಸ್ಟ್ 8 , 2013

ಮಂದಾರ್ತಿಯಲ್ಲಿ ಯಕ್ಷಗಾನ ಚಿಂತನಾ ಸಭೆ - ಕಾಲಮಿತಿ ಯಕ್ಷಗಾನ ಬೇಕೇ ಬೇಡವೇ ?

ಬ್ರಹ್ಮಾವರ : ಈಗಿನ ಕಾಲ ಘಟ್ಟದಲ್ಲಿ ಪೂರ್ಣ ರಾತ್ರಿಯ ಯಕ್ಷಗಾನಕ್ಕೆ ರಾತ್ರಿ 12 ಗಂಟೆ ನಂತರ ಕಂಡುಬರುವ ಪ್ರೇಕ್ಷಕರ ಕೊರತೆಯಿಂದ ಯಕ್ಷಗಾನ ಕಲಾವಿದರಲ್ಲಿ, ಕಲಾಭಿಮಾನಿಗಳಲ್ಲಿ ನೀರಸ ಭಾವನೆ ಕಂಡುಬಂದಿ ರುವುದರಿಂದ ಮಂದಾರ್ತಿ ದಶಾವತಾರ ಮೇಳದ ಹರಕೆ ಬಯಲಾಟಗಳಲ್ಲಿ ಕಾಲ ಮಿತಿ ಯಕ್ಷಗಾಗ ಪ್ರಯೋಗ ಪ್ರಸ್ತು ತವೋ? ಅಪ್ರಸ್ತುತವೋ? ಎನ್ನುವ ಬಗ್ಗೆ ಒಂದು ದಿನದ ಸಂವಾದ ಕಾರ್ಯಕ್ರಮ ಮಂದಾರ್ತಿಯ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಸಂವಾದದಲ್ಲಿ ಯಕ್ಷಗಾನದ ಹಿರಿಯ ವೃತ್ತಿ ಕಲಾವಿದರು, ಯಕ್ಷಗಾನದ ಹರಕೆ ಬಯಲಾಟ ಆಡಿಸುವವರು, ಯಕ್ಷಗಾ ನದ ಪ್ರೇಕ್ಷಕರು ನೂರಾರು ಸಂಖ್ಯೆಯಲ್ಲಿ ಸೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಆಟ ಆಡಿಸುವವರ ಪರವಾಗಿ ವಿಜಯ ಕುಮಾರ್ ಶೆಟ್ಟಿ, ಅಶೋಕ್ ಮಾಡ ಚೇರ್ಕಾಡಿ ಮಾತನಾಡಿ ಕಾಲ ಮಿತಿ ಅನಿವಾರ್ಯವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲ ವೊಂದು ಗ್ರಾಮೀಣ ಭಾಗದ ಆಟ ಆಡಿಸುವವರು ಹಳ್ಳಿಗಳಲ್ಲಿ ಕಾಲಮಿತಿ ಯಕ್ಷಗಾನ ಮಾಡಿದರೆ, ಆಟ ಮುಗಿದ ನಂತರ ಮಧ್ಯರಾತ್ರಿ ಆಟಕ್ಕೆ ಬಂದವರಿಗೆ ಹಿಂದಿರುಗಲು ಅಥವಾ ಉಳಿದು ಕೊಳ್ಳಲು ವ್ಯವಸ್ಥೆ ಮಾಡ ಲಿಕ್ಕಾ ಗುವುದಿಲ್ಲ. ಆದುದರಿಂದ ಯಕ್ಷಗಾನಕ್ಕೆ ಕಾಲಮಿತಿ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಾರಂಗದ ಮುರಳಿ ಕಡೆಕಾರ್ ಕಲಾವಿದರ ಆರ್ಥಿಕ ಭದ್ರತೆಯ ಬಗ್ಗೆ ಮತ್ತು ಯಕ್ಷಗಾನದ ಗುಣ ಮಟ್ಟ ಸುಧಾರಣೆ ಅಗತ್ಯವನ್ನು ವಿವರಿಸಿದರು. ಕಾಲಮಿತಿಯ ಪ್ರಯೋಗವನ್ನು ನೀಲಾ ವರ ಮೇಳದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಿರುವ ಬಗ್ಗೆ ಮಾತನಾಡಿದ ನೀಲಾವರ ದೇವಸ್ಥಾನದ ಮೊಕ್ತೇ ಸರರಾದ ಸುಪ್ರಸಾದ ಶೆಟ್ಟಿ ಹರಕೆ ಬಯಲಾಟ ಮಾತ್ರ ಇನ್ನೂ ಕಾಲ ಮಿತಿಯಲ್ಲಿ ಅಳವಡಿಸಿಲ್ಲ ಎಂದರು.

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ.ಎಲ್.ಸಾಮಗ ಮಾತನಾಡಿ ಕಾಲಮಿತಿ ಅಳವಡಿಸುವಾಗ ಯಕ್ಷಗಾನ ಕಲಾವಿದರ, ಯಕ್ಷಗಾನ ಮೇಳದ ಯಜಮಾನರ, ಯಕ್ಷಗಾನ ಆಟ ಆಡಿಸುವವರ, ಯಕ್ಷಗಾನ ಪ್ರೇಕ್ಷ ಕರ ಪರ-ವಿರೋಧದ ಅಭಿಪ್ರಾಯ ವನ್ನು ಗಣನೆಗೆ ತೆಗೆದುಕೊಂಡು ಅದರ ಸಕಾರಾತ್ಮಕ ಹಾಗೂ ನಕಾರಾತ್ಮಕ ಫಲಿ ತಾಂಶವನ್ನು ಪರಿಶೀಲಿಸಬೇಕಾ ಗುತ್ತದೆ ಎಂದರು.

ಸಂವಾದ ಸಭೆಯ ಕೊನೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ ಮಾತನಾಡಿ ಕಾಲ ಮಿತಿ ಯಕ್ಷಗಾನದ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಿದ್ದೇವೆ. ಆಟ ಆಡಿಸುವವರಲ್ಲೂ ಅಭಿಪ್ರಾ ಯವನ್ನೂ ತಿಳಿದುಕೊಂಡು ಹೆಚ್ಚಿನ ಬೇಡಿಕೆ ಬಂದಲ್ಲಿ ಕಾಲಮಿತಿ ಯಕ್ಷಗಾನ ಪ್ರಯೋಗ ನಡೆಸುವ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ, ಮಂದಾರ್ತಿಯ ಕೆ.ಎಂ.ಉಡುಪ, ಸಾಲಿಗ್ರಾಮ ಮಕ್ಕಳ ಮೇಳದ ಶ್ರೀಧರ ಹಂದೆ, ಯಕ್ಷಗಾನ ಕಲಾ ರಂಗ ಉಡುಪಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ನೀಲಾವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಪ್ರಸಾದ ಶೆಟ್ಟಿ, ನಿವೃತ್ತ ಖಜಾನೆ ಅಧಿಕಾರಿ ಕೆ.ಕೆ.ನಾಯ್ಕ, ಕ್ಷೇತ್ರ ಶಿಕ್ಷಣಾ ಧಿಕಾರಿ ವಸಂತ ಶೆಟ್ಟಿ, ಯಕ್ಷಗಾನ ವಿಮ ರ್ಶಕ ಎಸ್.ವಿ.ಉದಯ್ ಕುಮಾರ್ ಶೆಟ್ಟಿ, ಯಕ್ಷಗಾನ ಕಲಾವಿದ ಕೆ.ಪಿ.ಹೆಗ್ಡೆ ಇತರೆ ಮೊಕ್ತೇಸರರು ಉಪಸ್ಥಿತರಿದ್ದರು.

ಶೇಡಿಕೊಡ್ಲು ವಿಠಲ ಶೆಟ್ಟಿ ಸ್ವಾಗತಿಸಿದರು. ತಾಂತ್ರಿಕ ಸಲಹೆಗಾರ ಪ್ರದೀಪ್ ಶೆಟ್ಟಿ ಕಾಲಮಿತಿ ಯಕ್ಷಗಾಗದ ಬಗ್ಗೆ ಪ್ರಾಸ್ತಾವನೆ ಮಾಡಿದರು. ಯಕ್ಷಗಾನ ಕಲಾವಿದರ ಪರವಾಗಿ ಮಾರಾಳಿ ಭೋಜ ಶೆಟ್ಟಿ, ಹೆರಿಯ ನಾಯ್ಕ, ಎಂ.ಎ.ನಾಯ್ಕ ಮೊದಲಾ ದವರು ಕಾಲಮಿತಿ ಅನಿವಾರ್ಯತೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಗೋಪಾಲ ನಾಯ್ಕ ವಂದಿ ಸಿದರು. ಸರ್ಪು ಸದಾನಂದ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ